Welcome to
Sanjay Gandhi College of Education
Sanjay Gandhi College of Education
ನಮ್ಮ ಸಂಸ್ಥೆಯ ಬಗ್ಗೆ
ಸಂಜಯ ಗಾಂಧಿ ಶಿಕ್ಷಣ ಮಹಾವಿದ್ಯಾಲಯವನ್ನು ಶ್ರೀ. ಪಿ. ಸದಾಶಿವನ್, ಅಧ್ಯಕ್ಷರು, ಶ್ರೀ. ಎಂ. ವಿಶ್ವೇಶ್ವರಯ್ಯ ಶಿಕ್ಷಣ ಟ್ರಸ್ಟ್ ಅಡಿಯಲ್ಲಿ ಗುಣಾತ್ಮಕ ಪ್ರಶಿಕ್ಷಣ ನೀಡಬೇಕೆಂಬ ಉದ್ದೇಶದೊಂದಿಗೆ 1980ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದರು. ಸದರಿ ಟ್ರಸ್ಟ್ ಕರ್ನಾಟಕದಲ್ಲಿ ವೃತ್ತಿಪರ ಕೋರ್ಸ್ ಗಳನ್ನು ನಡೆಸುವಲ್ಲಿ ಅಪಾರ ಅನುಭವವನ್ನು ಹೊಂದಿದೆ. ನಮ್ಮ ವಿದ್ಯಾಲಯದ ಮಹತ್ತರ ಗುರಿ ಎಂದರೆ, ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದೇ ಆಗಿದೆ. ಉತ್ತಮ ಕಟ್ಟಡ ಹಾಗೂ ಉತ್ತಮ ಬೋಧನಾ ತರಬೇತಿ ಹೊಂದಿದ ಕಾರಣ, ನಮ್ಮ ಸಂಸ್ಥೆಯು ರಾಜ್ಯದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿದೆ.
ಈ ಸಂಸ್ಥೆಯು ಪ್ರಶಿಕ್ಷಣದಲ್ಲಿ ಪದವಿ ತರಬೇತಿಯಾಗಿದ್ದು, (ಬಿ.ಇಡಿ) ಸಂಸ್ಥೆಯು ಬೆಂಗಳೂರು ನಗರ ವಿಶ್ವವಿದ್ಯಾಲಯದ ಶಾಶ್ವತ ಸಂಯೋಜನೆಗೆ ಒಳಪಟ್ಟಿದ್ದು ಎನ್.ಸಿ.ಟಿ.ಇ ಯ ಮಾನ್ಯತೆ ಹೊಂದಿದೆ. ಕರ್ನಾಟಕ ಸರ್ಕಾರದಿಂದ ಅನುದಾನಕ್ಕೆ ಒಳಪಟ್ಟಿದೆ ಹಾಗೂ ಎನ್.ಎ.ಎ.ಸಿ ಯ ಅಕ್ರಿಡಿಟೇಷನ್ ಗೆ ಒಳಪಟ್ಟಿದೆ.